Monday, March 16, 2009

Bhagyada Lakshmi Baaramma

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ 
ನಮ್ಮಮ್ಮಾ ನೀ
ಸೌ ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ದ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಕನಕ ವೃಷ್ಟಿಯ ಕರೆಯುತ ಬಾರೆ ಮನ ಕಾಮನೆಯ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ ಜನಕರಾಜನ ಕುಮಾರಿ ವೇದ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯ ಮಹೋತ್ಸವ ನಿತ್ಯ ಸುಮಂಗಲ
ಸತ್ಯವ ತೋರುತ ಸಾಧು ಸಜ್ಜನರ ಚಿತ್ತದಿ ಹೊಳೆಯುವ ಪುತ್ತಲಿ ಬೊಂಬೆ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಸಂಖ್ಯೆ ಇಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜಲೋಚನೆ ವೆಂಕಟರಮಣನ ಬಿಂಕದ ರಾಣಿ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠಲನ ರಾಣಿ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
 
If you are not able to view the above properly, click on the image below.


 

Shivashtakam

ಶಿವಾಷ್ಟಕಂ

ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ 
ಜಗನ್ನಾಥ ನಾಥಂ ಸದಾನಂದ ಭಾಜಂ 
ಭವದ್ಭವ್ಯಭೂತೇಶ್ವರಂ ಭೂತನಾಥಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಗಲೇರುಂಡಮಾಲಂ ತನೌಸರ್ಪಜಾಲಂ 
ಮಹಾಕಾಲಕಾಲಂ ಗಣೇಶಾದಿಪಾಲಂ 
ಜಟಾಜೂಟಭಂಗೋತ್ತರಂಗೈರ್ವಿಶಾಲಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಮುದಾಮಾಕರಂ ಮಂಡನಂ ಮಂಡಯಂತಂ 
ಮಹಾಮಂಡನಂ ಭಸ್ಮಭೂಷಾಧರಂತಂ 
ಅನಾದಿಹ್ಯಪಾರಂ ಮಹಾಮೋಹಹಾರಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ವಟಾದೋ ನಿವಾಸಂ ಮಹತ್ತಟ್ಟಹಾಸಂ 
ಮಹಾಪಾಪನಾಶಂ ಸದಾಸುಪ್ರಕಾಶಂ 
ಗಿರೀಶಂ ಗಣೇಶಂ ಸುರೇಶಂ ಮಹೇಶಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಗಿರೀಂದ್ರಾತ್ಮಜಾಸಂಗೃಹೀತಾರ್ಧದೇಹಂ 
ಗಿರೌ ಸಂಸ್ಥಿತಂ ಸರ್ವದಾ ಸನ್ನಗೇಹಂ 
ಪರಬ್ರಹ್ಮಬ್ರಹ್ಮಾದಿಭಿರ್ವಂದ್ಯಮಾನಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಶರಚ್ಚಂದ್ರ ಗಾತ್ರಂ ಗುಣಾನಂದ ಪಾತ್ರಂ 
ತ್ರಿನೇತ್ರಂ ಪವಿತ್ರಂ ಧನೇಶಾಯ ಮಿತ್ರಂ 
ಅಪರ್ಣಾ ಕಳತ್ರಂ ಚರಿತ್ರಂ ವಿಚಿತ್ರಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಹರಂಸರ್ಪಹಾರಂ ಚಿತಾಭೂವಿಹಾರಂ 
ಭವಂವೇದಸಾರಂ ಸದಾನಿರ್ವಿಕಾರಂ 
ಸ್ಮಶಾನೇ ವಸಂತಂ ಮನೋಜಂ ದಹಂತಂ 
ಶಿವಂ ಶಂಕರಂ ಶಂಭುಮೀಶಾನಮೀಡೇ

ಸ್ತವಂ ಯಃ ಪ್ರಭಾತೇ ನರಃ ಶೂಲಪಾಣೇ 
ಪಠೇತ್ ಸ್ತೋತ್ರರತ್ನಂ ಇಹಪ್ರಾಪ್ಯರತ್ನಂ 
ಸುಪುತ್ರಂ ಸುಧ್ಯಾನಂ ಸುಮಿತ್ರಂ ಕಳತ್ರಂ 
ವಿಚಿತ್ರೈ ಸಮಾರಾಧ್ಯ ಮೋಕ್ಷಂ ಪ್ರಯಾತಿ


If you are unable to view the above properly, click on the below image.

achyutam keshavam


ಆಚ್ಯುತಂ ಕೇಶವಂ

ಆಚ್ಯುತಂ ಕೇಶವಂ ರಾಮನಾರಾಯಣಂ, ಕೃಷ್ಣ ದಾಮೋದರಂ ವಾಸುದೇವಂ ಹರಿಂ ||
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ ಜಾನಕೀನಾಯಕಂ ರಾಮಚಂದ್ರಂ ಭಜೇ ||

ಆಚ್ಚ್ಯುತಂ ಕೇಶವಂ ಸತ್ಯಭಾಮಾಧವಂ ಮಾಧವಂ ಶ್ರೀಧರಂ ರಾಧಿಕಾರಾಧಿತಂ ||
ಇಂದಿರಾ ಮಂದಿರಂ ಚೇತಸಾ ಸುಂದರಂ ದೇವಕೀನಂದನಂ ನಂದನಂ ಸಂದಧೇ ||

ವಿಷ್ಣವೇ ಜಿಷ್ಣವೇ ಶಂಕಿಣೇ ಚಕ್ರಿಣೇ ರುಕ್ಮಿಣೀ ರಾಗಿಣೇ ಜಾನಕೀ ಜಾನಯೇ ||
ವಲ್ಲವೀ ವಲ್ಲಭಾಯಾರ್ಚಿತಾಯಾತ್ಮನೇ ಕಂಸ ವಿಧ್ವಂಸಿನೇ ವಂಶಿನೇ ತೇ ನಮಃ ||

ಕೃಷ್ಣ ಗೋವಿಂದ ಹೇ ರಾಮನಾರಾಯಣೇ ಶ್ರೀಪತೇ ವಸುದೇವಾರ್ಚಿತಾ ಶ್ರೀನಿಧೇ ||
ಅಚ್ಯುತಾನಂತ ಹೇ ಮಾಧವಾಧೋಕ್ಷಜ ದ್ವಾರಕಾ ನಾಯಕಾ ದ್ರೌಪದೀ ರಕ್ಷಕ ||

ರಾಕ್ಷಸಕ್ಷೋಭಿತಃ ಸೀತಯಾಶೋಭಿತೋ ದಂಡಕಾರಣ್ಯ ಭೂ ಪುಣ್ಯತಾ ಕಾರಣಃ ||
ಲಕ್ಷ್ಮಣೇನಾನ್ವಿತೋ ವಾನರಃ ಸೇವಿತೋ ಅಗಸ್ತ್ಯಾಂ ಪೂಜಿತೋ ರಾಘವಃ ಪಾತು ಮಾಂ ||

ಧೇನುಕಾರಿಷ್ಟಕೋ ಅನಿಷ್ಟಕೃದ್ಧ್ವೇಶಿಣಾಂ ಕೇಶಿಹಾ ಕಂಸಹೃದ್ದ್ವಂಶಿಕಾವಾದಕಃ ||
ಪೂತನಾಕೋಪಕಃ ಸೂರಜಾ ಖೇಲನೋ ಬಾಲ ಗೋಪಾಲಕಃ ಪಾತು ಮಾಂ ಸರ್ವದಾ ||

ವಿದ್ಯುದುದ್ದ್ಯೋತ್ತವತ್ ಪ್ರಸ್ಪುರದ್ವಾಸಸಂ ಪ್ರವೃದಾಂಭೋದವತ್ ಪ್ರೋಲ್ಲಸದ್ವಿಗ್ರಹಂ ||
ವನ್ಯಯಾ ಮಾಲಯಾ ಶೋಭಿತೋರಸ್ಥಲಂ ಲೋಹಿತಾಂಗ್ರಿದ್ಯುಯಂ ವಾರಿಜಾಕ್ಷಂ ಭಜೇ ||

ಕುಂಚಿತೈಃ ಕುಂತಲೈರ್ಭಾಜಿಮಾನಾನನಂ ರತ್ನಮೌಳಿಂ ಲಸತ್ಕುಂಡಲಂ ಗಂಡಯೋಃ ||
ಹಾರಕೇಯೂರಕಂ ಕಂಕಣಾಪ್ರೋಜ್ವಲಂ ಕಿಂಕಿಣೀ ಮಂಜುಲಂ ಶ್ಯಾಮಲಂ ತಂ ಭಜೇ ||
If you are unable to view the above text properly, click on the image below.